ನವಶಕ್ತಿ ವೈಭವ
ನವಶಕ್ತಿ ವೈಭವ, 2008 ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ರಾಮಕುಮಾರ್, ಶ್ರುತಿ, ಜಯಮಾಲಾ ಹಾಗೂ ಸುಧಾರಾಣಿ ಈ ಚಿತ್ರದಲ್ಲಿ ಪ್ರಮುಖವಾಗಿ ಅಭಿನಯಿಸಿದ್ದಾರೆ. ವೀಕ್ಷಕರಿಗೆ ಈ ಚಿತ್ರವು ಕರ್ನಾಟಕದ ಪವಿತ್ರ ಕ್ಷೇತ್ರಗಳಾದ ಕೊಲ್ಲೂರು ಮೂಕಾಂಬಿಕೆ, ಬದಾಮಿ ಬನಶಂಕರಿ, ಮೈಸೂರು ಚಾಮುಂಡೇಶ್ವರಿ, ಬೆಳಗಾವಿಯ ಸೌದತ್ತಿ ಯಲ್ಲಮ್ಮ, ಹೊರನಾಡು ಅನ್ನಪೂರ್ಣೇಶ್ವರಿ, ಕಟೀಲು ದುರ್ಗಾಪರಮೇಶ್ವರಿ, ಬೆಂಗಳೂರು ಅಣ್ಣಮ್ಮದೇವಿ, ಶೃಂಗೇರಿ ಶಾರದಾಂಬೆ, ಗೋಕರ್ಣ ಪರಮೇಶ್ವರಿ ದೇವಾಲಯಗಳ ದರ್ಶನ ಮಾಡಿಸುತ್ತದೆ. ನವ ದೇವಿಯರಿಗೆ ಹೊತ್ತ ಹರಕೆಯನ್ನು ಈಡೇರಿಸದಾದಾಗ ದಂಪತಿಗಳಿಗೆ ಸಾಕಷ್ಟು ತೊಂದರೆಗಳುಂಟಾಗುತ್ತವೆ. ಎಲ್ಲವನ್ನು ಪರಿಹರಿಸಿಕೊಳ್ಳಲು ಮಕ್ಕಳ ಸಮೇತ ಅವರು ನವ ದೇವಿ ದೇವಾಲಯಗಳಿಗೆ ಭೇಟಿ ನೀಡುತ್ತಾರೆ.
Details About ನವಶಕ್ತಿ ವೈಭವ Movie:
Movie Released Date | 8 Feb 2008 |
Genres |
|
Audio Languages: |
|
Cast |
|
Director |
|
Keypoints about Navashakthi Vaibhava:
1. Total Movie Duration: 2h 8m
2. Audio Language: Kannada